Happy Navaratri ! Happy Dasara !

October 19, 2026

Navratri Oneliners

Happy Sharon Navratri

HUMOUR IN NEWS


ಸ್ವಯಂ ಪ್ರಭೆ

October 6, 2026

ಸ್ವಯಂ ಪ್ರಭೆ

ರಚನೆ : ರಾಮಕೃಷ್ಣ ಬೆಳ್ಳೂರು

ಅಪರಿಚಿತರಾಗಿ ಭೇಟಿಗೊಂಡು ಸಾಗಿದೆವು ಸ್ನೇಹಪಥದಿಂದ
ಪ್ರೇಮಪಥದೆಡೆಗೆ ಕಾಲಕ್ರಮೇಣ

ಸಪ್ತಪದಿಯ ನಂತರ ಬಾಳಪಥದಿ ನಡೆದೆವು
ರಾಜಪಥದಿ ಚಲಿಸುತ್ತಾ ಚೈತ್ರ ವಸಂತಗಳು ಕಳೆಯುತ್ತಾ

ನವಮಾಸದ ನಂತರ ನವೋಲ್ಲಾಸದಿ ನಡೆದನು ನವಶಿಶು
ನಾರಾಯಣನ ಪಥವೇ ನಿನ್ನ ಪಥವಾಯಿತು ಬಹುತೇಕ

ಸಂಸಾರ ಸಾಗರದಿ ಕೆಲವೊಮ್ಮೆ ಹಾಕಬೇಕಾದರೂ ಶತಪಥ
ಮಾತೃತ್ವ ಭಾವದಿ ನಡೆಸಿದೆ ಸಂಸಾರ ಪಥವ

ಬಹುಕಾಲದಿಂದ ಪಯಣಿಸುತ್ತಿರುವೆ ಆಧ್ಯಾತ್ಮದ ಪಥದಲ್ಲಿ
ತದೇಕಚಿತ್ತದಿ ಧ್ಯಾನಮಗ್ನಳಾಗಿ ರೂಪಿಸಿಕೊಂಡಿರುವೆ ಸ್ವಯಂಪ್ರಭೆ

ಯುಕ್ತಿಯಿಂದ ಮುನ್ನಡೆದು ಭಕ್ತಿ ಪಥದಿ
ಬಹು ದೂರ ತಲುಪಿರುವೆ ದೈವ ಪಥ ದತ್ತ


Decode the Graphics

September 28, 2026

ಅನಂತ

September 25, 2026

ಅನಂತ
ರಚನೆ : ರಾಮಕೃಷ್ಣ ಬೆಳ್ಳೂರು

ನಮ್ಮ ಪ್ರೀತಿ ಅನಂತ
ನಮ್ಮ ಸಂಬಂಧ ಅನಂತ
ನಮ್ಮ ಸಹೃದಯತೆ ಅನಂತ
ನಮ್ಮ ಸಂತೋಷ ಅನಂತ
ನಮ್ಮ ಸಂಸ್ಕಾರ ಅನಂತ

ನಮ್ಮ ಆತ್ಮೀಯತೆ ಅನಂತ
ನಮ್ಮ ರಾಗ ಅನಂತ
ನಮ್ಮ ಯೋಗ ಅನಂತ
ನಮ್ಮ ರಸಾಸ್ವಾದ ಅನಂತ
ನಮ್ಮ ನಗು ಅನಂತ

ನಮ್ಮ ಮಾತು ಅನಂತ
ನಮ್ಮ ಮೌನ ಅನಂತ
ನಮ್ಮ ಭಾವ ಅನಂತ
ನಮ್ಮ ಶಾಂತಿ ನೆಮ್ಮದಿ ಅನಂತ
ನಮ್ಮ ಪ್ರಗತಿ ಅನಂತ

ನಮ್ಮ ಕಲೆ ಅನಂತ
ನಮ್ಮ ಕಲಿಕೆ ಅನಂತ
ನಮ್ಮ ಕೃತಜ್ಞತೆ ಅನಂತ
ನಮ್ಮ ಉತ್ಸಾಹ ಅನಂತ
ನಮ್ಮ ಯಶಸ್ಸು ಅನಂತ

ನಮ್ಮ ಸಾಮರ್ಥ್ಯ ಅನಂತ
ನಮ್ಮ ನಂಬಿಕೆ ಅನಂತ
ನಮ್ಮ ಆತ್ಮವಿಶ್ವಾಸ ಅನಂತ
ನಮ್ಮ ದೈವಭಕ್ತಿ ಅನಂತ
ನಮ್ಮ ಗುರು ಪರಂಪರೆ ಅನಂತ


Kendriya Vidyalaya Malleswaram: Nostalgia 6

September 3, 2026

Sitting – Right to Left: Champa, Shyamala, (Late) Prashanti, Prathibha, Malathi Prakash Ma’m
Standing behind Champa is Sushma


OH! TO BE A KV TEACHER………

[WRITTEN WITH ADULATION TO THE K.V. FRATERNITY]

by Dr. K. LEENA MADAN

Oh! To be a K V teacher, isn’t just an ordinary feature,

It is a pragmatic quest of precision and zest…

Of endless endeavours and countless targets….

No sooner the curtain descends, with the year ending examinations,

Lo! The curtains again ascend, with new academic deliberations,

With supersonic vibrations…….

With new admissions and unending priorities,

Assuring new faces with varying dimensions,

Oh! To be a K V teacher, isn’t just an ordinary feature,

Teaching, inspiring, sensitizing,

Wooing, cajoling and energizing,

Syllabus and lesson plans, reiterations and corrections,

Projects and assignments, marks and grades,

Teachers’ tests and recruitments,

Inspirations and surprises, exhibitions and conferences

Visits and workshops, celebrations and gaieties,

Escorting and trainings, meetings and committees,

Mutations and musings, often and anon,

CCA and sports, accolades and awards,

Arguments and confrontations,

Oh! To be a K V teacher, isn’t just an ordinary feature,

A friend, philosopher and a guide,

A parent, an organizer in every period,

An actor, doctor and a mentor,

A judge, facilitator and an entrepreneur,

Are the countless facets of a K.V teacher,

Oh! To be a K V teacher, isn’t just an ordinary feature,

As years roll by and time flies by,

Though one’s superannuation is yonder by,

With unending tasks and works galore,

With techno-savvy skills and benign pragmatism,

Surmounting experience and an acquired professionalism,

With never ending memories and a classic enthusiasm,

There is a spark of a alluring ecstasy

Across their spirited and wrinkled faces,

Unmindful of all the agony of by gone years,

There is the phenomenal k v teacher with a motto,

The true representative of k v sangathan ingusto,

The mantle bearers of the k v fraternity intoto

Eagerly awaiting the pristine faces,

Like an infant awaiting his mother’s embrace,

To start all over again,

To impart lessons and doctrines,

And reiterate the teachings and sermons,

With kaleidoscopic hues and child like eagerness,

To continue the noble journey till eternity,

Hailing globally with remarkable surety,

That the unique disciples they carve and design,

Are indeed pristine, precious and rare,

Oh! To be a K V teacher, isn’t just an ordinary feature,

*************

Also read:

KVM DIAMOND JUBILEE [1966 – 2026]… growing stronger

Teacher’s Dialogues and Mannerisms

Cork ball and Library ‘Miss’

Kendriya Vidyalaya Malleswaram: Nostalgia 1

Kendriya Vidyalaya Malleswaram: Nostalgia 2

Kendriya Vidyalaya Malleswaram: Nostalgia 3

Kendriya Vidyalaya Malleswaram: Nostalgia 4

Kendriya Vidyalaya Malleswaram: Nostalgia 5

Kendriya Vidyalaya Malleswaram Alumni Meet – Jan 26, 2012

Saturday First Two Periods: Mass PT

Kendriya Vidyalaya Malleswaram Alumni Meet – Jan 26, 2013

Lunch time @ School!

Smt.B.Vijayalakshmi madam (KVM)

T Prabhakar Sir, Former Principal (Kendriya Vidyalaya Malleswaram) No More

Suleena Nair Madam no more

Random Jottings on Facebook – 4

Memories of Childhood Injuries

15 August, 2007 was a lovely day


BC Nagesh : 1959-2026

August 19, 2026

🪔ಜೊತೆಗಿದ್ದ ಜನ ಮನಗಳಿಗೆ ನಮನಗಳು🪔

ಮಾಜಿ ಶಿಕ್ಷಣ ಸಚಿವರು ಹಾಗೂ ತಿಪಟೂರಿನ ಮಾಜಿ ಶಾಸಕರಾದ ದಿವಂಗತ ಶ್ರೀ ಬಿ. ಸಿ. ನಾಗೇಶ್ ಅವರ ಅಂತಿಮ ಯಾತ್ರೆ ಹಾಗೂ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ, ಎರಡು ದಿನಗಳ ಕಾಲ ಅವರ ಅಂತಿಮ ದರ್ಶನಕ್ಕೆ ಆಗಮಿಸಿ, ಶಾಂತಚಿತ್ತದಿಂದ ಹಾಗೂ ಸುವ್ಯವಸ್ಥಿತವಾಗಿ ದರ್ಶನದ ವ್ಯವಸ್ಥೆ ಕಲ್ಪಿಸಲು ಸಹಕರಿಸಿದ ಎಲ್ಲಾ ನಾಗೇಶಣ್ಣನವರ ಅಭಿಮಾನಿಗಳು, ಕಾರ್ಯಕರ್ತರು, ಸಮಸ್ತ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಆಡಳಿತ ವರ್ಗದವರಿಗೆ, ಅಲ್ಲದೇ ಸ್ವಯಂಪ್ರೇರಿತರಾಗಿ ಅವರ ಗೌರವಾರ್ಥವಾಗಿ ಅಂಗಡಿ-ಮುಂಗಟ್ಟುಗಳು ಹಾಗೂ ಶಾಲೆಗಳನ್ನು ಮುಚ್ಚಿ, ಗೌರವ ಸಲ್ಲಿಸಿದ ವರ್ತಕರು, ಸಂಘ-ಸಂಸ್ಥೆಗಳಿಗೂ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

ಬಿಜೆಪಿ ಪಕ್ಷದ ಹಿರಿಯ ನಾಯಕರು, ವಕ್ತಾರರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಪಕ್ಷಾತೀತವಾಗಿ ಆಗಮಿಸಿದ ಎಲ್ಲಾ ಗಣ್ಯರು ತಮ್ಮ ಸಂತಾಪವನ್ನು ವ್ಯಕ್ತಪಡಿಸಿ, ನಮ್ಮ ಕುಟುಂಬಕ್ಕೆ ಸಾಂತ್ವನ ನೀಡಿದ್ದೀರಿ. ತಮ್ಮ ನುಡಿ ನಮನಕ್ಕೆ ನಾವು ಆಭಾರಿಗಳು.

ನಮ್ಮ ದುಃಖದ ಸಮಯದಲ್ಲಿ ನಮ್ಮೊಂದಿಗೆ ನಿಂತ ತಮ್ಮ ಪ್ರೀತಿ, ಗೌರವ, ಸಾಂತ್ವನ ಹಾಗೂ ಸಹಕಾರಗಳೇ ನಮಗೆ ಧೈರ್ಯವಾಯಿತು. ಈ ಪ್ರೀತಿ, ಅಭಿಮಾನ ಮತ್ತು ಕಾಳಜಿಗೆ ಬೆಳ್ಳೂರು ಕುಟುಂಬ ಸದಾ ಋಣಿಯಾಗಿರುತ್ತದೆ

— ಬೆಳ್ಳೂರು ಕುಟುಂಬ, ತಿಪಟೂರು


Jayanth Bellur’s Nudinamana to his Chikkappa, Late. Sri BC Nagesh [click on the below hyperlink to see video]
ಇಂದು ನಮ್ಮ ಪ್ರೀತಿಯ ಬಿ.ಸಿ. ನಾಗೇಶಣ್ಣನವರ ಸವಿನೆನಪಿನಲ್ಲಿ ತಿಪಟೂರಿನಲ್ಲಿ ಕಾರ್ಯಕರ್ತರೆಲ್ಲರೂ ಒಗ್ಗೂಡಿ ಹಮ್ಮಿಕೊಂಡಿದ್ದ ‘ನುಡಿ ನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಆಡುವ ಭಾಗ್ಯ ನನ್ನದಾಗಿತ್ತು.

ನಾಗೇಶಣ್ಣನವರ ಸರಳತೆ, ಸಾರ್ವಜನಿಕ ಜೀವನದಲ್ಲಿ ಅವರಿಗಿದ್ದ ಬದ್ಧತೆ ಈ ವೇದಿಕೆಯಲ್ಲಿ ಸ್ಮರಿಸಲಾಯಿತು. ಈ ಅರ್ಥಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಹಲವು ಧರ್ಮಗುರುಗಳು, ಹಿರಿಯ ನಾಯಕರಾದ ಕೆ.ಎಸ್. ಈಶ್ವರಪ್ಪನವರು, ಸಿ.ಟಿ. ರವಿ, ಅರುಣ್ ಶಹಪೂರ್, ವಿಷ್ಣುಕಾಂತ್ ಎಸ್. ಚತಪಲ್ಲಿ, ರಾಜೇಶ್ ಪದ್ಮಾರ್, ಕ್ಷೇತ್ರದ ಹಿರಿಯ ಕಾರ್ಯಕರ್ತರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದು ತಮ್ಮ ನುಡಿನಮನಗಳನ್ನು ಸಲ್ಲಿಸಿದರು.


BJP के वरिष्ठ नेता का हुआ निधन, राजनीति जगत में शोक की लहर

கர்நாடகாவில் ஹிஜாப் தடையை கொண்டு வந்த அமைச்சர் பி. சி. நாகேஷ் தோல்வி

Both Houses of Karnataka Legislature pay tribute to former education minister B.C. Nagesh

What happened when a ‘common man’ called Karnataka education minister BC Nagesh at 11.30pm?

(Above link from TOI [22-3-2023])


Below: Vijayavani dtd 19.8.26

Below: Kannada Prabha dtd 19.8.26

Wiki: B C NAGESH

Below: Vishwavani dtd 19.8.26

Below: Hosa Digantha dtd 19.8.26

Below: Samyuktha Karnataka dtd 19.8.26

Praja Vani: ಸ್ಪಷ್ಟ ನಿಲುವಿನ ನಾಯಕ ‘ಬಿ.ಸಿ. ನಾಗೇಶ್’: ಸಂಘಟನೆಯಿಂದ ಸಚಿವ ಸ್ಥಾನದವರೆಗೆ..

Praja Vani: ಮಾಜಿ ಶಿಕ್ಷಣ ಸಚಿವ ಬಿ.ಸಿ‌.ನಾಗೇಶ್ ನಿಧನ

Vijaya Karnataka: ಸರಳ ಜೀವನಶೈಲಿಗೆ ಮನೆಮಾತಾಗಿದ್ದ ಹಿರಿಯ ಬಿಜೆಪಿ ಮುಖಂಡ, ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ವಿಧಿವಶ

Udayavani: ಹಿರಿಯ ಬಿಜೆಪಿ ನಾಯಕ, ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನಿಧನ

Deccan Herald: Former minister B C Nagesh passed away at 67

B C Nagesh Biography

Praja Vani: ತಿಪಟೂರು ಶಾಸಕ ಬಿ.ಸಿ.ನಾಗೇಶ್ ಪರಿಚಯ ಇಲ್ಲಿದೆ

RSS ಕಟ್ಟಾಳು ಬಿ.ಸಿ.ನಾಗೇಶ್‍ಗೆ ಒಲಿದ ಮಂತ್ರಿಗಿರಿ

Leader of the people in Tipperary, BC Nagesh

Former Karnataka Minister BC Nagesh dies at 67 after prolonged illness

B.C. Nagesh Passes Away: ಆರ್‌ಎಸ್‌ಎಸ್‌ ಕಟ್ಟಾಳು, ಮಾಜಿ ಸಚಿವ ಬಿ.ಸಿ.ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ

Karnataka’s BC Nagesh & Controversies: Minister Who Doesn’t Cross the RSS Line

[The Hindu]

BC Nagesh on X

Below: AI on BC Nagesh


R Ashoka [Leader of the Opposition- Karnataka Legislative Assembly, Former DyCM, MLA – Padmanabhanagar] :
ತಿಪಟೂರು ಕ್ಷೇತ್ರದ ಮಾಜಿ ಶಾಸಕರು, ಮಾಜಿ ಸಚಿವರು ಹಾಗೂ ಪಕ್ಷದ ಹಿರಿಯ ನಾಯಕರಾದ ಶ್ರೀ ಬಿ.ಸಿ.ನಾಗೇಶ್ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ಅತ್ಯಂತ ನೋವುಂಟಾಗಿದೆ.

ಶಿಕ್ಷಣ ಸಚಿವರಾಗಿ ಅವರು ಹಲವು ಮಹತ್ವದ ಸುಧಾರಣೆಗಳನ್ನು ಮಾಡಿದ್ದರು. ಉತ್ತಮ ಜನಪ್ರತಿನಿಧಿಯಾಗಿ ಜನರೊಂದಿಗೆ ಸದಾ ನಿಕಟ ಸಂಪರ್ಕ ಹೊಂದಿ ಜನಪರ ಕಾರ್ಯಗಳಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಪಕ್ಷದ ಸಿದ್ಧಾಂತ ಹಾಗೂ ಸಂಘಟನೆಯ ಬಲವರ್ಧನೆಗೆ ಅವರ ಕೊಡುಗೆ ಸದಾ ಸ್ಮರಣೀಯ. ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆ ಹಾಗೂ ವೈಚಾರಿಕ ನಿಷ್ಠೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದ ಹಿರಿಯ ನಾಯಕನ ಅಗಲಿಕೆ ಪಕ್ಷಕ್ಕೂ, ರಾಜ್ಯಕ್ಕೂ ತುಂಬಲಾರದ ನಷ್ಟ.

ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬದ ಸದಸ್ಯರು, ಬಂಧುಗಳು, ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರಿಗೆ ಈ ದುಃಖವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

I SUPPORT B C NAGESH – BJP TIPTUR

ಶಾಸಕ ಬೇಕೋ ಅಥವಾ ಸೇವಕನೊ ಆಯ್ಕೆ ನಿಮ್ಮದು ಅಧಿಕಾರಕ್ಕಾಗಿ ಅಲ್ಲ ಅಭಿವೃದ್ಧಿಗಾಗಿ ಜನಸೇವಕರಾದ ಬಿ ಸಿ ನಾಗೇಶ್ ಅಣ್ಣ. ಬಿಜೆಪಿ ಗೆಲ್ಲಿಸಿ.

ಮಾಜಿ ಶಿಕ್ಷಣ ಸಚಿವ, ಹಿರಿಯ ಬಿಜೆಪಿ ನಾಯಕ ಬಿ.ಸಿ. ನಾಗೇಶ್ ನಿಧನ; ನಾಳೆ ಅಂತ್ಯಕ್ರಿಯೆ!

B C Nagesh Tiptur on Facebook

BC Nagesh Bio

Former Education Minister B.C. Nagesh Passes Away; Funeral in Tiptur

STAR OF MYSORE: BC Nagesh ARCHIVES

DK Shivakumar pays tribute to BJP’s BC Nagesh at party headquarters

ಬಿ.ಸಿ.ನಾಗೇಶ್ ನನ್ನ ಹಳೆಯ ಸ್ನೇಹಿತ, ಪ್ರಾಥಮಿಕ ಶಿಕ್ಷಣಕ್ಕೆ ಅವರ ಕೊಡುಗೆ ಶ್ಲಾಘನೀಯ: ಸಿಎಂ ಡಿಕೆ.ಶಿವಕುಮಾರ್ ಸಂತಾಪ

Karnataka CM DK Shivakumar says, “I came to pay my respects to my old friend Nagesh, who served as an MLA and a minister alongside me and did excellent work in the field of primary education… It is my duty to honor him, and the state will accord him full respect… This is a huge loss for his family and his party as well… May God grant peace to his soul.”

ಬಿ.ಸಿ.ನಾಗೇಶ್ ಅಗಲಿಕೆಗೆ ಸಚಿವ ಪ್ರಹ್ಲಾದ್ ಜೋಶಿ ಕಂಬನಿ

ಮಾಜಿ ಸಚಿವ ಬಿ.ಸಿ. ನಾಗೇಶ್ ನಿಧನ; ಸಿಎಂ ಸೇರಿ ಗಣ್ಯರಿಂದ ಸಂತಾಪ

Final rites of former minister B C Nagesh to be performed today

Nagesh was an honest person: CM D.K. Shivakumar

कर्नाटक विधानसभा के दोनों सदनों ने पूर्व शिक्षा मंत्री बीसी नागेश को श्रद्धांजलि दी

Tributes pour in for former Karnataka education minister BC Nagesh

BJP veteran & Former Karnataka Education Minister B C Nagesh passes away at 67 after prolonged battle with brain tumour……

“Did excellent work in the primary Education field” Karnataka CM DK Shivakumar pays tribute to BJP leader B.C. Nagesh

The Man Who Answered My Call: Remembering Sri B C Nagesh (by Chaithanya Vishwamitra D A)

Above Video Clip of BC Nagesh Taking Oath in 2021 As Cabinet Minister At Raj Bhavan | Karnataka Cabinet Expansion 2.0. He was inducted into the Basavaraj Bommai ministry and was made the Minister of Primary & Secondary Education

ಪಂಚಭೂತಗಳಲ್ಲಿ ಬಿ.ಸಿ. ನಾಗೇಶ್ ಲೀನ – ಕಂಬನಿ ಮಿಡಿದ ತಿಪಟೂರು


Below post by BC Nagesh’s Sister Gayathri Sheshadri on his birthday


Sincere Thanks to Jayanth P Bellur (nephew of Sri BC Nagesh) for sharing below Photos on Facebook

Jayanth Bellur: Ee nepadalli ajjana hesaru kuda matte news aagtirodu khushi tandide.

Shishya guruvanna meersbeku, maga tande na meersbeku.

Ajja, I have heard was a great businessman and not a politician at all. But people of Tiptur had requested him to contest elections because of his contribution towards the society and his popularity and had made him an MLA. After he lost his second election, he took the responsibility of resurrecting temples in and around Tiptur and was made the Dharmadhikari of almost all temples(if not all).

I don’t know abt other fields, but in politics, his son has definitely achieved bigger things than him. (Sry ajja if m wrong)

Sri BCN was totally independent. He didn’t come under his father’s shadow at all. In fact BCN entered politics before his father did. But their ideologies were different, their political parties are different. Coming from a rich family, he gave up all worldly pleasures and had become a full time worker with ABVP even before ajja joined politics.

But after his father became an MLA, family business also needed more helping hands. Only because of that did he come back to become a family man. Else he would still be a full time worker. 


Below pic – BC Prakash, Subbanna with Master Hirannaiah:

Description for below photo by Jayanth Bellur:
This teachers’ day I would like to thank these people because of whom High Voltage Equipments Company came into existence.

This pic was taken when Sringeri Jagadguru Sri Bharathi theertha Mahaswamigalu had visited our factory to bless us.

Back in 1973, 2 scientists from IISC with the patent of a new technology in High Voltage Engineering approached Sri B S Chandrashekariah(ajja) to pitch in a business idea and set up an industry in Bengaluru.

The product they started developing was, lightning arresters, which is an extremely essential component to protect the transformers that cost lacs or even crores(depending on various factors)

Ajja readily invested and was made the chairman of the company. Appa joined the company as the managing director in 1982 after he completed his engineering.

Neither Appa then, nor me now had any knowledge about the product/high voltage Engineering.

Dr. Nagabhushana who is now a part of many research institutes across the country trained Appa and Appa was quick enough to learn he says.

He is now training me!

I thank him for his patience and concern.
I thank ajja for investing, Appa for everything.

Salutations to the lotus feet of Jagadgurugalu, namaskaras to all 

🙏🏽
🙏🏽
🙏🏽

Description for below photo by Jayanth Bellur:
This is probably the only pic where all 3 brothers are together. All of them love each other and wish for the others’ well being but don’t show that warmth when they are together. Vichitra brothers 

😝
😝
😝

. All are busy in their own way.

Irli, coming to the main point eega…

ಅಪ್ಪ ಮಧ್ಯದವರಾದ್ರಿಂದ ಕಾರ್ಯ/ಕರ್ಮದಲ್ಲಿ ಅವರ ಕೆಲಸ ಕಮ್ಮಿ ಇರ್ತಿತ್ತು. ದೊಡ್ಡವರಿಗೆ, ಚಿಕ್ಕವರಿಗೆ ಕೆಲಸ ಜಾಸ್ತಿ ಇರತ್ತಂತೆ. ಜೊತೆಗೆ ಅಪ್ಪನಿಗೆ ಕಾಲಿನ ಸಮಸ್ಯೆ ಶುರು ಆಗಿದ್ದು ಅಜ್ಜನ ಕಾರ್ಯದ ಸಮಯದಲ್ಲಿ ವಿಶದ ಮುಳ್ಳು ಚುಚ್ಚಿದಾಗ. ಕಾಲಿನ ಸಮಸ್ಯೆ ಇಂದಾಗಿ ಕೂಡ ಅಪ್ಪ ಶ್ರಾದ್ಧದ ಕಾರ್ಯದಲ್ಲಿ ಪಾಲ್ಗೊಂಡಿದ್ದು ಕಮ್ಮಿ.
ಬೇರೆ ಹಲವು ವಿಚಾರಗಳಲ್ಲಿ ಅಪ್ಪ ಸಾಕಷ್ಟು ಪುಣ್ಯ ಸಂಪಾದಿಸಿದ್ದಾರೆ. ಆದ್ರೆ ಶ್ರಾದ್ಧ ಮಾಡಿದ ಪುಣ್ಯ ಸ್ವಲ್ಪ ಕಮ್ಮಿ ಇರ್ಬೋದು ಅನ್ನೋದು ನನ್ನ ಭಾವನೆ.

ನಾನು ಒಬ್ನೇ ಮಗ ಆಗಿರೋದ್ರಿಂದ ಎಲ್ಲವನ್ನು ನಾನೇ ಮಾಡುವ ಭಾಗ್ಯ ದಯಪಾಲಿಸಿದ್ದೀಯಾ. ಅಪ್ಪ, ಎಲ್ಲ ಕಾರ್ಯ ಇವತ್ತು ಮುಗೀತು. ಆರ್ಥಿಕ ಜವಾಬ್ದಾರಿ ಇಂದ ಹಿಡಿದು ಶ್ರಾದ್ಧಕ್ಕೆ ಬೇಕಾದ ಸಾಮಗ್ರಿಗಳ ಅಣಿಮಾಡಿಕೊಳ್ಳುವಿಕೆ, ಜಾಗದ ವ್ಯವಸ್ಥೆ ಜನರನ್ನ ಕರೆಸೋದು, ಯಾವ ಜವಾಬ್ದಾರಿಯೂ ನನ್ನ ತಲೆ ಮೇಲೆ ಬೀಳದಂತೆ ಇಡೀ ಕುಟುಂಬ ನೋಡಿಕೊಂಡಿತು. ಹೀಗಾಗಿ ನನ್ನ ಸಂಪೂರ್ಣ ಗಮನ ಕಾರ್ಯದ ಮೇಲೆ ಇತ್ತು. ಪ್ರತಿ ಕ್ಷಣ ನಿನ್ನ ಒಳಿತಿಗಾಗಿಯೇ ಯೊಚ್ಸಿ ಕಾರ್ಯ ಮಾಡಿದೀನಿ.
ಎಲ್ಲರೂ ಶ್ರದ್ಧೆ ಇಂದ ಮಾಡ್ದೆ ಅಂತ ಹೇಳ್ದ್ರು. ಏನೇನು ತಲುಪಬೇಕೋ ನಿನಗೆ ತಲುಪಿರಲಿ ಎಂದು ಪ್ರಾರ್ಥಿಸುತ್ತೇನೆ. ಒಟ್ನಲ್ಲಿ ನೀನ್ ಖುಷಿಯಾಗ್ ಇರ್ಬೇಕು.
ಶ್ರಾದ್ಧ ಮಾಡಿದ ನನ್ನ ಪಾಲಿನ ಅರ್ಧಪಾಲು ಪುಣ್ಯ ಕೂಡ ನಿನಗೆ ದೊರೆಯಲಿ.

ಕಾರ್ಯ ಮಾಡೋವಾಗ ನಿಷ್ಠೆ ಇಂದ ಮಾಡ್ತಿದ್ದೆ. ಯಾಕೆ ಅಂದ್ರೆ ಆತ್ಮ ನಂ ಜೊತೆನೇ ಎಲ್ ಬೇಕಾದ್ರು ಇರ್ಬೋದು. ನನ್ ಜೊತೆ ಅಂತೂ ನೀ ಯಾವಾಗ್ಲೂ ಇದ್ದೆ ಇರ್ತ್ಯ.
ಆದ್ರೆ ಹಾರ ಹಾಕಿದ ನಿನ್ನ ಫೋಟೋ ನೋಡೋವಾಗ ಸ್ವಲ್ಪ ಬೇಜಾರಾಗೋದು. ಸಹಜ. Accept ಮಾಡ್ಕೊಂಬಿಡಣ.

ಈಗ ನಿನ್ನ ಸ್ವರೂಪ ಬದಲಾಗಿದೆ ಅಷ್ಟೇ. ನಿನ್ನ ನೋವು, ಉರಿ, ಬಾಧೆ ಕೊನೆಯಾಗಿದೆ. ಅದರ ತೃಪ್ತಿ ಅಂತೂ ಇದೆ ಅಲ್ವ ???

ಆರಾಮಾಗಿರು ಖುಷಿಯಾಗಿರು ಸಂತೋಷವಾಗಿರು.


Description for above photo by Jayanth Bellur:

Appa sharing this dream he had got, gives me so much relief. He is being blessed by divine forces is the feeling I get.

Appa used to sleep across the bed keeping his legs on the ground because if he used to keep it up on the bed he used to feel unbearable burning sensation.

Gist of the dreams that Appa had got a few weeks back.

Dream1:
Appa is sleeping in his dream. Ajja Ajji appear in his dream.

Ajja: Yako Prakasha hing malkondidya?
Appa: kaal melitkondre uryatte annayya

Ajji: Yako Prakasha isht oddadtidya?
Appa: Yako Nodi hing aaghogide…
Ajja: naan Ond heltini madtya?
Appa: neev helidd Yav kelsa maadilla annayya? Heli …

Ajja: 10 dina, dinaa malgak munche Chandrashekara Bharathigala hesrna 10 sala helko…

Appa does this for 10 days.(in reality)

2nd Dream on the 10th day. Jagadguru sri sri Chandrashekara Bharathigalu appear in his dream.

Chandrashekara Bharathigalu: Yak hing malgidya sareeg malko.

Appa: aiyyo illa gurugale thumba uriyatte…
Chandra shekara bharathigalu: naan heltidini sareeg malko.

Appa struggles and sleeps properly(in the dream)

Chandrashekara bharathugalu: Ning ellelli en en problem ide helu…

Appa: kaal poorthi gaaya, mandi novu, Sonta fracture aagide, heart enlargement anthare. Pain killer togondre kidney, liver fail agatte anthare.

Chandrashekara Bharathigalu touches him from head to toe and says:

“Sadhyadalle ninna ella samasyegaligu parihara kodtini hogu… aaramagiru”

He is always the centre of attraction. He has that force to attract anybody he meets.

Many people describe him as a magnet that attracts people.

Jayanth Bellur – Above pic was taken in our house in Tiptur 😃😃😃.

Ella nam chikkappandru atteru irodu pic alli 😆😆😆.

Indu HarishNagendra BellurSrikanth BellurSathish Bellur

Am able to recognise anandi, prashanthi, nagendri, Indu, Srikanthi… mikkdaur yaru antha gottagtilla 😬😬😬

Thanks for this pic, @vishnuvardhan fans!

Above: B M Shreekantiah mattu Lakshmi devammanavara(muttajja mattu muttajji) original pic

B C Nagesh Tiptur

— with Narendra Singh Tomar नरेन्द्र सिंह तोमर.


ಕಲ್ಪತರು ನಾಡು ತಿಪಟೂರಿನಲ್ಲಿ ತೆಂಗು ಬೆಳೆಗಾರ ರೈತರ ಸಮಾವೇಶವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಅಮಿತ್ ಶಾ ಉದ್ಘಾಟಿಸಿದರು ಈ ವೇಳೆ Yatheesh Art ರಚಿಸಿದ ಸನ್ಮಾನ್ಯ ಶ್ರೀ ಅಮಿತ್ ಶಾ ಅವರಿಗೆ ಅವರ ಭಾವಚಿತ್ರವನ್ನು ನೀಡಿದ ಕ್ಷಣ

B C Nagesh Tiptur (@bcnagesh.tiptur)


Karnataka elections result 2023: BJP MLA who imposed Hijab ban defeated by Congress

ಶಿಕ್ಷಕ ವೃತ್ತಿ ಬದುಕಿನ ಅವಕಾಶದ ಕದ ತೆರೆದವರು ಬಿ ಸಿ ನಾಗೇಶ್ ಸರ್…..

ಖಾಸಗಿ ಕಾಲೇಜೊಂದರಲ್ಲಿ, ಉಪನ್ಯಾಸಕನಾಗಿ ಕರ್ತವ್ಯ ನಿರ್ವೈಹಿಸುತ್ತಿದ್ದ ನನಗೆ ಕರೋನ ಎಂಬ ಗ್ರಹಣವು ಸರ್ಕಾರದ ಉದ್ಯೋಗದ ಕದ ತಟ್ಟುವಂತೆ ಮಾಡಿತು, ಅದೆ ಸಂದರ್ಭಕ್ಕೆ ಅಂದಿನ‌ ಶಿಕ್ಷಣ ಸಚಿವರಾಗಿದ್ದ ಬಿ ಸಿ ನಾಗೇಶ್ ರವರು 15000 ದೊಡ್ಡ ಜಿಪಿಟಿ ಶಿಕ್ಷಕರ ನೇಮಕಾತಿಯನ್ನು ಮಾಡುವುದಾಗಿ ಘೋಷಿಸಿ, C&R rule ತಿದ್ದುಪಡಿ ಪ್ರಕ್ರಿಯೆ ಹಾಗು ಸಾಕಷ್ಟು ಬದಲಾವಣೆಗಳು ನಡೆಸುತ್ತಿದ್ದರು. ಪದವಿಯಲ್ಲಿ ಐಚ್ಚಿಕ ವಿಷಯಗಳಾಗಿ ಇಂಗ್ಲೀಷ್ ಜೊತೆಗೆ ಮನೋವಿಜ್ಞಾನ ಮತ್ತು ಸಮಾಜಶಾಸ್ತ್ರ ಅಭ್ಯಾಸಿದ್ದೆ. ಆದರೆ ಜಿಪಿಟಿ ಆಂಗ್ಲ ಹುದ್ದೆಗಳಿಗೆ ಪರೀಕ್ಷೆ ಬರೆಯಲು ಐಚ್ಚಿಕ ವಿಷಯವಾಗಿ ಇಂಗ್ಲೀಷ್ ಜೊತೆಗೆ ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಮತ್ತು ಭೂಗೋಳ ಶಾಸ್ತ್ರ ದಲ್ಲಿ ಯಾವುದಾದರು ಒಂದನ್ನ ಓದಿರ ಬೇಕೆಂಬ ನಿಯಮವಿತ್ತು ಆದ ಕಾರಣ 2015 ರಲ್ಲಿಯೆ TET eligible ಆಗಿದ್ದರು ನನಗೆ ಪರೀಕ್ಷೆ ಬರೆಯಲು ಅವಕಾಶವಿರಲಿಲ್ಲ ಆದರೆ ಅವಕಾಶ ಪಡೆಯುವುದು 2022ರ ಸಂದರ್ಭದಲ್ಲಿ ಅನಿವಾರ್ಯವಾಗಿತ್ತು. ಹಾಗಾಗಿ ಬಹುತೇಕ ರಾಜಕಾರಣಿಗಳನ್ನ ಪೋನ್ ಮೂಲಕ ಸಂಪರ್ಕಿಸುತ್ತಿದ್ದೆ. ಆಗ ನನ್ನ ಡಿಗ್ರಿ ಉಪನ್ಯಾಸಕರಾದ ನಾಗರಾಜ್ ಸರ್ ಮತ್ತು ಆರಗ ಜ್ಞಾನೇಂದ್ರ ರವರು ಸಹಕಾರ ಮಾಡಿದರು. ನಂತರ DS ಅರುಣ್ MLC ಇವರ ಸಲಹೆ ಮೇರೆಗೆ ನನ್ನ ಒಂದಿಷ್ಟು ಸ್ನೇಹಿತರೊಂದಿಗೆ ತಿಪಟೂರ್ ನಲ್ಲಿರುವ ನಾಗೇಶ್ ಸರ್ ಮನೆಗೆ ಹೋಗಿ ಬೇಟಿಯಾದೆ.

ನಾನು ಮೊದಲಬಾರಿಗೆ ಯಾರಾದರು ರಾಜಕಾಕರಣಿ/ ಸಚಿವರನ್ನು ನೇರವಾಗಿ ಬೇಟಿಯಾಗಿದ್ದೇನೆಂದರೆ ಅದು ಬಿ ಸಿ ನಾಗೇಶ್ ರವರನ್ನ. ಹಾರ ತೆಗೆದುಕೊಂಡು ಅವರ ಮನೆ ಮುಂದೆ ನಿಂತ ನಮಗೆ ಅವರ office ಗೆ ಕರೆದು ಏನು ವಿಷಯ? ಕೇಳಿದರು. ನಾವು ನಮಸ್ಕಾರ ಸಾರ್. ಎಂದು ಹಾರ ಹಾಕಲು ಮುಂದಾದಾಗ ‘ಯಾವುದಾದರು ದೇವಸ್ಥಾನಕ್ಕೆ ಕೊಡ್ರಯ್ಯಾ, ನಾನೇನ್ ದೇವರಾ’ ಎಂದು, ನಿರಾಕರಿಸಿದರು. ತದನಂತರ ನಾನು, ‘ಸರ್, ಜಿಪಿಟಿ ಇಂಗ್ಲಿಷ್ ಹುದ್ದೆಗೆ ಸಮಾಜಶಾಸ್ತ್ರ ವನ್ನ ಸೇರಿಸಬೇಕು, ಇದರಿಂದ ತುಂಬಾ ಅಭ್ಯರ್ಥಿಗಳಿಗೆ ಅನುಕೂಲವಾಗುತ್ತೆ’ ಎಂದೆ. ಅವರು ತಕ್ಷಣಕ್ಕೆ, ‘ಮಿನಿಸ್ಟರ್ ನಾನ! ನೀನ! ನೀನು ಹೇಳಿದ್ದನ್ನೆಲ್ಲ ಮಾಡೊಕೆ ಆಗಲ್ಲ’. ಎಂದು ಬೈದು ನಡಿರಿ ಮನೆಗೆ ಎಂದು ಬಿಟ್ಟರು. ನನ್ನ ಜೊತೆಗೆ ಬಂದ ಸ್ನೇಹಿತರೆಲ್ಲರು ನಿರಾಸೆಯಿಂದ ಹೊರನಡೆದು ಚಪ್ಪಲಿ ಹಾಕಿಕೊಂಡು ಹಿಂದಿರುಗಲು ಸಿದ್ದರಾಗುತ್ತಿದ್ದರು ಕೂಡ ನಾನು ಮಾತ್ರ ಆದೇನೊ ಗಟ್ಟಿಯಾಗಿ ಅಲ್ಲೆ ಕೈ ಕಟ್ಟಿ ನಿಂತೆ. ಯಾವೂದೊ ಹುಡುಗನ ಹಾಸ್ಟೆಲ್ ಸೀಟ್ ವಿಷಯವಾಗಿ ಬಂದವರನ್ನ ಮಾತಾಡಿಸಿ ನಮ್ಮೆಡಗೆ ತಿರುಗಿ, ‘ಅವರಿಗೆ ಟೀ ಕೊಟ್ಟನಯ್ಯಾ?’ ಎಂದು ಅವರ ಕೆಲಸದವರಿಗೆ ಕರೆದು ಟೀ ಕೊಡಲು ಸೂಚಿಸಿದರು ಮತ್ತೆ ನಮ್ಮನ್ನ ಕರೆದು ಯಾವೆಲ್ಲ ಊರು ಕೇಳಿ, ಟಿಇಟಿ ಪಾಸ್ ಆಗಿದ್ಯಾ ಎಂದೆಲ್ಲ ಕೇಳಿದರು ನಮ್ಮೆದುರಿಗೆ ಅಂದಿನ‌ ಆಯುಕ್ತರಿಗೆ ಕರೆ ಮಾಡಿ ‘ನೋಡ್ರಿ ಸಾಕಷ್ಟು ಕಾಲ್ ಬರ್ತಿವೆ. ನಾಳೆ ಒಂದು ಮೀಟಿಂಗ್ ಮಾಡಿ ಇಂಗ್ಲೀಷ್ ಹುದ್ದೆಗೆ ಸಮಾಜಶಾಸ್ತ್ರ ಒಂದನ್ನ ಸೇರ್ಸ್ರಿ…’ ಎಂದರು. ನಮ್ಮೆಡಗೆ ತಿರುಗಿ ‘ನಿಮ್ಮ ಕೆಲಸ ಆಗುತ್ತೆ, ಎಲ್ಲರು ಪರೀಕ್ಷೆಲಿ ಪಾಸ್ ಆಗ್ಬೇಕು. ಎನ್ರಯ್ಯಾ! ನೀವು ಶಿಕ್ಷಕರಾದ ಮೇಲೆ ಬಡವರ ಮಕ್ಕಳಿಗೆ ಚೆನ್ನಾಗಿ ಪಾಠ ಮಾಡ್ಬೇಕು’ ಎಂದರು. ನಾನು ಅವರ ಕಾಲಿಗೆ ಎರಗಿದವನೆ ‘ಥ್ಯಾಂಕ್ಯೂ ಸರ್’ ಎಂದೆ. ಎಲ್ಲರು ಕೈ ಮುಗಿದು ಖುಷಿಯಲ್ಲಿ ಊರಿನೆಡೆಗೆ ಹಿಂದಿರುಗಿದೆವು.

ಪರೀಕ್ಷೆಯಲ್ಲಿ ಆಯ್ಕೆಯಾಗಿ ದಕ್ಷಿಣ ಕನ್ಙಡದಲ್ಲಿ ಮೂರನೇ ರ್ಯಾಂಕ ಪಡೆದಾಗ ಬಿ ಸಿ ನಾಗೇಶ್ ರವರಿಗೆ ಕರೆ ಮಾಡಿ ಪರಿಚಯ ಹೇಳಿಕೊಂಡು ಖುಷಿ ಹಂಚಿಕೊಂಡಾಗ ಅವರು ‘ಶಹಬಾಷ್’ ಎಂದಿದ್ದರು.

ಹೀಗೆ ನನಗೆ ನನ್ನಂತ ಸಾವಿರಾರು ಅಭ್ಯರ್ಥಿಗಳಿಗೆ ಜಿಪಿಟಿ ಹುದ್ದೆಗೆ ಪರೀಕ್ಷೆ ಬರೆಯಲು ಅವಕಾಕಶ ಕಲ್ಪಿಸಿ ಕೊಟ್ಟವರು ಬಿ ಸಿ ನಾಗೇಶ್ ರವರು.

ನಮ್ಮದೇ ನೇಮಕಾತಿಯಲ್ಲಿ ಕೆಲವು ಕೋರ್ಟ್ ಕೇಸ್ ಕಾರಣದಿಂದ ನೇಮಕಾತಿ ವಿಳಂಬವಾದಾಗ ಅವರನ್ನ ಮೂರ್ನಾಲ್ಕು ಬಾರಿ ಬೇಟಿಯಾಗಿದ್ದೆ ತದನಂತರ ನೇಮಕಾತಿಯ ಹೋರಾಟದ ನೇತೃತ್ವ ವಹಿಸಿಕೊಂಡು ಮೂರುನೂರಕ್ಕು ಹೆಚ್ಚು ಆಯ್ಕೆಯಾದ ಅಭ್ಯಾರ್ಥಿಗಳ ಜೊತೆ ಅವರ ಮನೆಯ ಮುಂದೆ ಹೋಗಿ ನಿಂತಿದ್ದೆವು. ಆಗ ಮನೆಯಿಂದ ಹೊರಬಂದ ಸರ್ ‘ಏನ್ರಯ್ಯಾ, ನೀವು ಶಿಕ್ಷಕರಾಗುವವರು, common sense ಇಲ್ವೇನ್ರಯ್ಯಾ, ನಡೀರಿ, ನಡೀರಿ‌ ಮುಂದೆ, ಕೋರ್ಟ್ ಗೆ ಹೋಗಿ’ ಎಂದು ಸಿಟ್ಟಾಗಿ ಹೇಳಿ ಒಂದು ನಿಮಿಷವು ಅಲ್ಲಿ ನಿಲ್ಲದೆ ಅವರು ಯಾವುದೋ ಕಾರ್ಯಕ್ರಮಕ್ಕೆ ಹೋದರು. ಅಲ್ಲಿ ನೆರೆದಿದ್ದ ಅಭ್ಯಾರ್ಥಿಗಳು ಕೋಪ ಮತ್ತು ಬೇಸರದಲ್ಲಿ ಒಬ್ಬೊಬ್ಬರು ಒಂದೊಂದು ಸಲಹೆಗಳನ್ನು ಕೊಡುತ್ತಿದ್ದರು. ಕೊನೆಗೆ ನಾವೊಂದಿಬ್ಬರು ಎಲ್ಲರಿಗು ಕೈ ಮುಗಿದು ಅವರನ್ನೆಲ್ಲ ಮನೆ ಕಳುಹಿಸಿ ಸಂಜೆವರೆಗು ಸಚಿವರ ಮನೆಯಲ್ಲೆ ಕಾದು ಕುಳಿತಿದ್ದೆವು

ಕಾರ್ಯಕ್ರಮದಿಂದ ಹಿಂತಿರುಗಿ ಮನೆಗೆ ಬಂದು ರೆಸ್ಟ್ ಮಾಡಿ ಹೊರಬಂದ ಸಚಿವರು, ‘ಏನ್ರಯ್ಯಾ ಇನ್ನೂ ಮನೆಗೆ ಹೋಗಿಲ್ಲ. ಆಗ್ಲೆ ಹೇಳಿದ್ನಲ್ಲಾ ಕೋರ್ಟ್ ಗೆ ಹೋಗಿ ಅಂತ, ಇನ್ನೇನು ನಿಮ್ಮದು?’ ಎಂದರು. ಸಾರ್, ಯಾರದ್ರು ಲಾಯರ್ ಇದ್ರೆ ನೀವೆ ಹುಡುಕಿ ಕೊಡಿ ಪ್ಲೀಸ್, ಎಂದೆ. ಅವರು ಸಿಟ್ಟಾಗಿ ‘ನಾನೇನು ಬ್ರೋಕರನಯ್ಯಾ, ನಿನಗೆ ಲಾಯರ್ ಹುಡ್ಕಿಕೊಡಲು, ನಡಿ ನಡಿ’ ಎಂದರು. ಸ್ಪಲ್ಪ ಹೊತ್ತು ಸುಮ್ಮನಾಗಿ ಅಮೇಲೆ ‘ಅದೇನ್ರಯ್ಯಾ ನಿಮ್ಮ ಹುಡಗರು ಅದೆಷ್ಟು ಪೋನ್ ಮಾಡ್ತಾರೆ? ನಾನೊಬ್ಬ ಸಚಿವ ಅನ್ನೊದು ಗೊತ್ತಿಲ್ದಾಗೆ ಮಾತಾಡ್ತರಲ್ರಯ್ಯಾ. ನಾನು ಏನೊ! ಯಾರೊ ಕಷ್ಟ ಹೇಳ್ಕಂಡು ಪೋನ್ ಮಾಡಿರ್ತಾರೆ ಅನ್ಕೊಂಡು ಎತ್ತಿದ್ರೆ, ನಿಮ್ಮ ಹುಡ್ಗುರು ನಿದ್ದೆ ಮಾಡಕು ಬಿಡದಾಗೆ ಕರೆಮಾಡಿ ಹಿಂಸೆ ಕೊಡ್ತಾರಲ್ರಯ್ಯಾ. ಅವರಿಗೆ ಸ್ವಲ್ಪ ಹೇಳು ಹಾಗೆಲ್ಲ ಕರೆ ಮಾಡ್ಬೇಡಿ ಅಂತ. ಕೇಸ್ ಕೋರ್ಟ್ ನಲ್ಲಿ ಇದೆ ಈಗ ಚುನಾವಣೆ ಸಮಯ ಕೋಡ್ ಆಪ್ ಕಂಡಕ್ಟ್ ಇರೋದ್ರಿಂದ ನಾನೇನು ಮಾಡೊದುಕ್ಕೆ ಬರೋದಿಲ್ಲ ಚುನಾವಣೆ ಮುಗಿದ ತಕ್ಷಣ ನಿಮ್ಮದೆ ಸಮಸ್ಯೆ ನಾನು ಮೊದಲು ಬಗೆಹರಿಸೋದು ಎಂದು ಕಳುಹಿಸಿಕೊಟ್ಟರು. ಆ ನಂತರ ನಡೆದ್ದು ನಿಮಗೆ ಗೊತ್ತಿದೆ. (ಆಗಲೆ ತೆಗೆದ ಪೋಟೊ ಇಲ್ಲಿರುವುದು)

ಈ ಸನ್ನಿವೇಶ ಹಂಚಿಕೊಳ್ಳಲು ಕಾರಣ ಅವರು ಮೊದ ಮೊದಲು ಹಲಸಿನ‌ ಹಣ್ಣಿನಂತೆ ಮುಳ್ಳು ಮುಳ್ಳು ಎನಿಸಿದರು ಒಳಗಿನ ತೋಳೆಗಳಷ್ಟೆ ಸಿಹಿ‌ ಮತ್ತು ಮೃದು. ತಕ್ಷಣಕ್ಕೆ ಕೋಪ ಬಂದವರಂತೆ ವರ್ತಿಸಿದರು ಸ್ವಲ್ಪ ಹೊತ್ತಿನಲ್ಲೆ ತಿಳಿಯಾಗಿ ಮಾತನಾಡುತ್ತಿದ್ದರು. ಅವರಿಗೆ ನಮ್ಮ ಶಿಕ್ಷಕ ಅಭ್ಯರ್ಥಿಗಳು ಹಗಲಿರಳೆನ್ನದೆ ಸ್ವಲ್ಪ ಅತಿಯಾಗೆ ಕರೆಮಾಡಿ ಮಾಹಿತಿ ಕೇಳುತ್ತಿದ್ದರು ಕೂಡ ಮೊಬೈಲನ್ನ ತನ್ನ ಪಿ ಎ ಕೈಗಿಡದೆ ತಾವೆ ಉತ್ತರಿಸುತ್ತಿದ್ದವರು. ನಾನು ನೇಮಕವಾಗಿ ಕರ್ತವ್ಯಕ್ಕೆ ಹಾಜರಾದ ಮೇಲು ಕರೆಮಾಡಿ ಮಾತಾಡಿದ್ದೆ. ಒಂದೆರಡು ಬಾರಿ ಬೆಂಗಳೂರಿನಲ್ಲಿ ಬೇಟಿಯಾಗಿ ಕುಶಲೋಪರಿ ವಿಚಾರಿಸಿದ್ದೆ. ಆಗಲು ಅವರು ಹೇಳುತ್ತಿದ್ದದ್ದು ‘ಏ! ನೀನು ಒಳ್ಳೆ ಪಾಠ ಮಾಡಬೇಕು ಕಣಯ್ಯಾ! ಸರ್ಕಾರಿ ಶಾಲೆಗೆ ಬರುವವರು ಬಡವರ ಮಕ್ಕಳು’ ಎಂದು ಕಾಳಜಿಯ ಮಾತುಗಳನ್ನಾಡುತ್ತಿದ್ದರು.

ಅತ್ಯಂತ ಸರಳ ವ್ಯಕ್ತಿತ್ವದವರು ಮತ್ತು ಯಾವಾಗಲು ಒಂದು ಪ್ಯಾಂಟ್ ಮತ್ತು ಜುಬ್ಬದಲ್ಲಿಯೆ ನೋಡ ಸಿಗುತ್ತಿದ್ದ, ಅವರು ಸಚಿವರಾದರು ದೂರದ ಪ್ರಯಣಗಳಿಗೆ ಸಾರ್ವಜನಿಕ ವಾಹನ ಬಳಸುತ್ತಿದ್ದದ್ದು ವಿಶೇಷ.

ರಾಜಕೀಯ ಸಿದ್ಧಾಂತಗಳಲ್ಲಿ ನನ್ನದು ಅವರ ಅಲೋಚನೆಗಿಂತ ಭಿನ್ನ ಮತ್ತು ವಿರುದ್ಧವಾಗಿದ್ದವು ಆದರೆ ಅದನೆಲ್ಲ ಬದಿಗಿಟ್ಟು ನೋಡಿದಾಗ ಅವರೊಂದಿಗಿನ ಚರ್ಚೆ ಮತ್ತು ಅವರು ನನಗೆ ನೀಡಿದ ವೃತ್ತಿ ಬದುಕಿನ ಅವಕಾಶ ಮರೆಯಲಾಗದ ನೆನಪು. ಇಂದು ಅವರು ಅನಾರೋಗ್ಯದ ನಿಮಿತ್ತ ಇಹಲೋಕವನ್ನು ತ್ಯಜಿಸಿದ್ದಾರೆ ಎಂಬ ವಿಷಯ ಕೇಳಿ ಒಮ್ಮೆಗೆ ಮನಸ್ಸಿಗೆ ಭಾರಗುತ್ತಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಅವರ ಅಗಲಿಕೆಯನ್ನ ಸಹಿಸಿಕೊಳ್ಳುವ ಶಕ್ತಿ ಕೊಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುವೆ….

-ಮೋಹನ ಕೊಳವಳ್ಳಿ…..



ವಿದೇಶಗಳಿಗೆ ಹೋಗುವ ಸಚಿವರಿಗೆ ಮೇಲ್ಪಂಕ್ತಿ ಹಾಕಿಕೊಟ್ಟ ನಾಗೇಶ್

– ವಿಶ್ವೇಶ್ವರ ಭಟ್ I ಇದೇ ಅಂತರಂಗ ಸುದ್ದಿ I ವಿಶ್ವವಾಣಿ – 21.11.2021

ರಾಜಕಾರಣಿಗಳು, ಸಚಿವರು ವಿದೇಶ ಪ್ರವಾಸಕ್ಕೆ ಮೋಜು ಉಡಾಯಿಸಲು ಹೋಗುತ್ತಾರೆ ಎಂಬ ಭಾವನೆ ಸಾಮಾನ್ಯರಲ್ಲಿದೆ. ಅದು ನಿಜವೂ ಇದ್ದಿರಬಹುದು. ಅದರಲ್ಲೂ ದುಬೈ, ಥೈಲ್ಯಾಂಡ್, ಮಲೇಶಿಯಾಕ್ಕೆ ಹೋದರೆ ಆ ಉದ್ದೇಶಕ್ಕೇ ಹೋಗುತ್ತಾರೆ ಎಂದು ಭಾವಿಸುವವರಿದ್ದಾರೆ. ಇದಕ್ಕೆ ಇಂಬು ನೀಡುವಂತೆ, ರಾಜಕಾರಣಿಗಳು ಸಹ ವರ್ತಿಸುವುದೂ ಉಂಟು.

ಮೊನ್ನೆ ನನ್ನ ‘ನೂರೆಂಟು ವಿಶ್ವ’ ಅಂಕಣದಲ್ಲಿ, ‘ಬೊಮ್ಮಾಯಿಯವರೇ, ವಿದೇಶ ಪ್ರವಾಸ ಮಾಡದಿರುವುದು ಶ್ರೇಷ್ಠತೆ ಅಲ್ಲ’ ಎಂಬ ಅಂಕಣಕ್ಕೆ ಓದುಗರೊಬ್ಬರು, ‘ರಾಜಕಾರಣಿಗಳು ವಿದೇಶ ಪ್ರವಾಸ ಹೋಗುವುದರಿಂದ ರಾಜ್ಯಕ್ಕೆ, ದೇಶಕ್ಕೆ ಆದ ಮತ್ತು ಆಗುವ ಲಾಭಗಳೇನು? ಅವರು ಬೇಕಾದರೆ ತಮ್ಮ ಸ್ವಂತ ಖರ್ಚಿನಲ್ಲಿ ಹೋಗಲಿ, ಆದರೆ ಸರಕಾರದ ಹಣದಲ್ಲಿ ಹೋಗುವುದು ನಿರರ್ಥಕ. ಅವರು ಅಲ್ಲಿಂದ ಬಂದು ಮಾಡುವುದು ಅಷ್ಟರಲ್ಲೇ ಇದೆ’ ಎಂದು ಪ್ರತಿಕ್ರಿಯಿಸಿದ್ದರು. ಸಚಿವರಾದವರು ಸಹ ವಿದೇಶಕ್ಕೆ ಹೋಗಿ ಕಡಿದುಕಟ್ಟೆ ಹಾಕುವುದು ಅಷ್ಟರಲ್ಲೇ ಇದೆ ಎಂಬ ಭಾವನೆ ಜನರಲ್ಲಿ ಮೂಡಿಬಿಟ್ಟಿದೆ.

ಆದರೆ ಮೊನ್ನೆ ನಾನು ದುಬೈಗೆ ಹೋದಾಗ, ನಮ್ಮ ಪ್ರಾಥಮಿಕ, ಪ್ರೌಢ ಶಿಕ್ಷಣ ಖಾತೆ ಸಚಿವರಾದ ಬಿ.ಸಿ.ನಾಗೇಶ್ ಕಾರ್ಯವೈಖರಿ, ಅದರಲ್ಲೂ ಅವರು ವಿದೇಶದಲ್ಲಿ ನಡೆದುಕೊಂಡ ರೀತಿ ನೋಡಿ ಆಶ್ಚರ್ಯವೂ ಆಯಿತು ಮತ್ತು ಅವರ ಬಗ್ಗೆ ಮತ್ತಷ್ಟು ಅಭಿಮಾನವೂ ಮೂಡಿತು. ಮೂಲತಃ ನಾಗೇಶ್ ಹೆಚ್ಚು ವಿದೇಶ ಪ್ರವಾಸ ಮಾಡಿದವರಲ್ಲ. ಶಾಸಕರಾಗಿ, ಅಧ್ಯಯನ ಪ್ರವಾಸ ನಿಮಿತ್ತ ಕೆಲವು ದೇಶಗಳಿಗೆ ಹೋಗಿರಬಹುದಷ್ಟೆ. ಅದರಲ್ಲೂ ಸಚಿವರಾದ ನಂತರ ಇದು ಅವರ ಮೊದಲ ವಿದೇಶ ಪ್ರವಾಸ. ಯುಎಇಯ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಸಂಘಟಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾಗೇಶ್ ದುಬೈಗೆ ಆಗಮಿಸಿದ್ದರು. ಅವರೊಂದಿಗೆ ಪತ್ನಿ ಮತ್ತು ಆಪ್ತ ಕಾರ್ಯದರ್ಶಿಯೂ ಜತೆಯಲ್ಲಿದ್ದರು.

ದುಬೈಯಲ್ಲಿದ್ದ ನಾಲ್ಕೂ ದಿನ ನಾಗೇಶ್ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅವರು ಉಳಿದುಕೊಂಡಿದ್ದ ಹೋಟೆಲಿನಲ್ಲಿಯೇ ನಾನೂ ಉಳಿದುಕೊಂಡಿದ್ದೆ. ಆದರೆ ನನಗೆ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಮತ್ತು ಒಂದು ಸಲ ಹೋಟೆಲಿನಲ್ಲಿ ಉಪಾಹಾರ ಸೇವಿಸುವಾಗ ಭೇಟಿಯಾಗಿದ್ದು ಬಿಟ್ಟರೆ, ನಾಗೇಶ್ ಜತೆ ಬಿಡುವಾಗಿ ಮಾತಾಡಲು ಸಹ ಆಗಲಿಲ್ಲ. ಬೆಳಗ್ಗೆ ಎಂಟು-ಒಂಬತ್ತು ಗಂಟೆಗೆ ಅವರು ಹೋಟೆಲ್ ಬಿಟ್ಟರೆ ಮರಳಿ ಹೋಟೆಲಿಗೆ ಬರುತ್ತಿದ್ದುದೇ ರಾತ್ರಿ ಒಂಬತ್ತರ ನಂತರ. ನಾಗೇಶ್ ಅಷ್ಟೊಂದು ‘ಬಿ.ಸಿ.’ !

ನಾಗೇಶ್ ಜತೆ ಹೋಗುತ್ತಿದ್ದ ಸ್ಥಳೀಯರೊಬ್ಬರು, ಸಚಿವರ ಬಗ್ಗೆ ಬಹಳ ಅಭಿಮಾನದಿಂದ ನನಗೆ ಹೇಳಿದರು – ‘ನಾನು ಕಳೆದ ಇಪ್ಪತ್ತು ವರ್ಷಗಳಿಂದ ಕರ್ನಾಟಕದಿಂದ ಆಗಮಿಸುವ ಸಚಿವರು ಮತ್ತು ರಾಜಕಾರಣಿಗಳನ್ನು ನೋಡಿದ್ದೇನೆ. ಆದರೆ ನಾಗೇಶ್ ಅವರಂಥ ಸಜ್ಜನ ರಾಜಕಾರಣಿಯನ್ನು ನೋಡಿಲ್ಲ. ಸಾಮಾನ್ಯವಾಗಿ ಎಲ್ಲರೂ ಒಂದೆರಡು ಸರಕಾರೀ ಕಾರ್ಯಕ್ರಮಗಳನ್ನು ನೆಪ ಮಾತ್ರಕ್ಕೆ ಜೋಡಿಸಿಕೊಂಡು ಇಲ್ಲಿಗೆ ಬರುತ್ತಾರೆ. ನಂತರ ದುಬೈಯಲ್ಲಿ ಪ್ರಸಿದ್ಧವಾಗಿರುವ ಮಾಲ್ ಗಳಿಗೆ ಶಾಪಿಂಗ್ ಹೋಗುತ್ತಾರೆ. ಇಲ್ಲಿಗೆ ಬಂದು ಕುಡಿದು, ತಿಂದು, ನೈಟ್ ಕ್ಲಬ್ ಗಳಿಗೆ ಹೋಗಿ ಮಜಾ ಮಾಡಿ ಹೋಗುತ್ತಾರೆ. ಹೋಗುವಾಗ ಹೊರಲಾಗದಷ್ಟು ಸಾಮಾನುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಅವರಿಗೆ ಹಣ (ದಿರ್ಹಮ್) ಕೊಡುವವರ, ಮಜಾ ಮಾಡಿಸುವವರ ದೊಡ್ಡ ಲಾಬಿಯೇ ಇಲ್ಲಿದೆ. ಈ ಸಚಿವರಿಂದ ಲಾಭ ಮಾಡಿಕೊಳ್ಳುವುದು ಹೇಗೆ ಎಂಬುದು ಗೊತ್ತಿರುತ್ತದೆ. ಆದರೆ ನಾಗೇಶ್ ಇವರೆಲ್ಲರಿಗಿಂತ ಭಿನ್ನವಾಗಿ ಎದ್ದು ನಿಲ್ಲುವ ವ್ಯಕ್ತಿ. ನನಗೆ ಅವರ ಬಗ್ಗೆ ಅಭಿಮಾನ ಉಂಟಾಯಿತು. ಈಗಿನ ಕಾಲದಲ್ಲಿ ಇಂಥ ಸಚಿವರೂ ಇದ್ದಾರಲ್ಲ ಎಂದು ಸಂತಸ ಮತ್ತು ಸಮಾಧಾನ ಆಯಿತು.’

‘ನಾಗೇಶ್ ತಾವು ದುಬೈಯಲ್ಲಿದ್ದ ನಾಲ್ಕೂ ದಿನ, ದಿನದಲ್ಲಿ ನಾಲ್ಕೈದು ಕಾರ್ಯಕ್ರಮಗಳಂತೆ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಜತೆಯಲ್ಲಿ ಪತ್ನಿ ಕೂಡ ಇದ್ದರು. ಸಾಮಾನ್ಯವಾಗಿ ಹೆಂಡತಿ ಜತೆ ಬರುವವರು, ತಾವು ಅಧಿಕೃತ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ, ಪತ್ನಿಯನ್ನು ಶಾಪಿಂಗ್ ಗೆ ಕಳಿಸುತ್ತಾರೆ. ಆದರೆ ನಾಗೇಶ್ ಹಾಗೆ ಮಾಡಲಿಲ್ಲ. ಒಂದೆರಡು ಕಡೆ ಅವರ ಪತ್ನಿ ವೀಣಾ ಸಹ ಮಕ್ಕಳೊಂದಿಗೆ ಸಂಸ್ಕೃತದಲ್ಲಿ ಮಾತಾಡಿದರು. ಅವರ ಪತ್ನಿ ಸರಳತೆ ಕಂಡು ನನಗೆ ಆಶ್ಚರ್ಯವಾಯಿತು’ ಎಂದು ನನ್ನ ಸ್ನೇಹಿತರು ಹೇಳಿದರು.

‘ದುಬೈಯಲ್ಲಿದ್ದಷ್ಟೂ ದಿನ ನಾಗೇಶ್ ಜೆಎಸ್ಎಸ್ ಸಂಸ್ಥೆ ಸೇರಿದಂತೆ ಕೆಲವು ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಮಕ್ಕಳೊಂದಿಗೆ ಸಂವಾದದಲ್ಲಿ ಭಾಗವಹಿಸಿದ್ದರು. ಮಕ್ಕಳು ಮತ್ತು ಶಿಕ್ಷಕರ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಶಾಲಾ ಮಕ್ಕಳಿಗೆ ಮತ್ತು ಶಿಕ್ಷಕರಿಗೂ ಇದರಿಂದ ಆನಂದವಾಯಿತು. ಕಾರಣ ಕರ್ನಾಟಕದ ಯಾವ ಸಚಿವರೂ ಇಷ್ಟು ವರ್ಷಗಳ ಕಾಲ ಅವರನ್ನು ಭೇಟಿಯಾಗಿದ್ದು ಇಲ್ಲವೇ ಇಲ್ಲ. ಅಷ್ಟೇ ಅಲ್ಲ, ಅಲ್ಲಿನ ಶಾಲೆಗಳು ಕಾರ್ಯನಿರ್ವಹಿಸುವ ರೀತಿ, ಶಿಕ್ಷಕರ ಸಮಸ್ಯೆ, ಸವಾಲು, ಕಾರ್ಯಚಟುವಟಿಕೆಗಳನ್ನು ಸಚಿವರು ತಿಳಿದುಕೊಂಡರು. ಅದರಲ್ಲೂ ನಾಗೇಶ್ ಅವರ ಸರಳ ನಡೆ-ನುಡಿ, ಪೋಷಾಕು, ಎಲ್ಲರೊಡನೆ ಬೆರೆಯುವ ಸ್ವಭಾವ ಕಂಡು ಅವರೆಲ್ಲರೂ (ಮಕ್ಕಳು, ಶಿಕ್ಷಕರು) ಬಹಳ ಖುಷಿಪಟ್ಟರು’ ಎಂದು ನನ್ನ ಸ್ನೇಹಿತರು ಹೇಳಿದರು.

‘ನಾಗೇಶ್ ಅವರಿಗೆ ಕನ್ನಡ ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ ಎಂದು ಅಂದುಕೊಂಡಿದ್ದೆ. ಹೀಗಾಗಿ ಅಲ್ಲಿನ ಮಕ್ಕಳು ಮತ್ತು ಶಿಕ್ಷಕರೊಂದಿಗೆ ಹೇಗೆ ವ್ಯವಹರಿಸುತ್ತಾರೆ ಎಂಬ ಅಳುಕು ಮತ್ತು ಕುತೂಹಲ ನನ್ನದಾಗಿತ್ತು. ಆದರೆ ಅವರು ಕನ್ನದಷ್ಟೇ, ಹಿಂದಿ ಮತ್ತು ಇಂಗ್ಲಿಷಿನಲ್ಲಿ ಕೂಡ ನಿರರ್ಗಳವಾಗಿ ಮತ್ತು ಚೆಂದವಾಗಿ ಮಾತಾಡಿದರು. ಅಲ್ಲದೇ ಅವರ ಮಾತಿನಲ್ಲಿ ಸಾಕಷ್ಟು ಹೊಸ ಮತ್ತು ಉತ್ತಮ ವಿಚಾರಗಳಿದ್ದವು. ಅವರ ನಡೆ-ನುಡಿಗಳಂತೂ ದುಬೈಯಲ್ಲಿರುವ ಕನ್ನಡಿಗರಿಗೆ ಅತೀವ ಸಮಾಧಾನ ತಂದುಕೊಟ್ಟಿದ್ದಂತೂ ನಿಜ’ ಎಂದು ಹಲವು ಸಂಘಟನೆಗಳೊಂದಿಗೆ ಸಂಪರ್ಕ-ಸಂಬಂಧ ಇಟ್ಟುಕೊಂಡಿರುವ ನನ್ನ ಸ್ನೇಹಿತರು ಹೇಳಿದರು.

ನನ್ನ ಆ ಸ್ನೇಹಿತರೊಬ್ಬರೇ ಅಲ್ಲ, ಆನಂತರ ನಾನು ಪಾಲ್ಗೊಂಡಿದ್ದ ಎರಡು ಕಾರ್ಯಕ್ರಮಗಳಲ್ಲಿ ಭೇಟಿಯಾದ ಕೆಲವು ಗಣ್ಯರು ಸಹ ಸಚಿವ ನಾಗೇಶ್ ಅವರ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ನಾಗೇಶ್ ಅವರನ್ನು ದುಬೈನ ಜನಪ್ರಿಯ ದೈನಿಕ ‘ಖಲೀಜ್ ಟೈಮ್ಸ್’ ಸಂದರ್ಶಿಸಿದ್ದು ಸಹ ಗಮನಾರ್ಹ. ನಾಗೇಶ್ ಭೇಟಿಯಿಂದ ಅವರ ವೈಯಕ್ತಿಕ ವರ್ಚಸ್ಸೊಂದೇ ಅಲ್ಲ, ರಾಜ್ಯ ಮತ್ತು ರಾಜ್ಯ ಸರಕಾರದ ಬಗ್ಗೆ ಸಕಾರಾತ್ಮಕ ಭಾವನೆ ಮೂಡುವಂತಾಗಿದ್ದು ಸುಳ್ಳಲ್ಲ. ನಾಗೇಶ್ ಮುಂಗಾಲಪುಟಿಕೆ ಸ್ವಭಾವದವರಲ್ಲ. ತಮ್ಮ ನೆಲೆಯಲ್ಲಿ, ನಿಷ್ಠೆಯಿಂದ, ದಕ್ಷತೆಯಿಂದ ಪ್ರಚಾರ ಬಯಸದೇ ಕೆಲಸ ಮಾಡುವವರು.

ದುಬೈ ಕನ್ನಡಿಗರು ನಾಗೇಶ್ ಅವರ ಈ ಭೇಟಿಯನ್ನು ಯಾವತ್ತೂ ನೆನಪಿಟ್ಟುಕೊಳ್ಳುವುದಂತೂ ನಿಜ. ಅಷ್ಟೇ ಅಲ್ಲ, ಅವರು ವಿದೇಶಗಳಿಗೆ ಹೋಗುವ ಸಚಿವರಿಗೆ ಮತ್ತು ರಾಜಕಾರಣಿಗಳಿಗೆ ಒಂದು ಒಳ್ಳೆಯ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

ಸಂಘಪರಿವಾರದ ಸಂಸ್ಕೃತಿ ಯಿಂದ ಬೆಳೆದ ಶಾಸಕರು ನಮ್ಮ ನಾಗೇಶಣ್ಣ
— Ramesh Dummenahally

ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ ಮತ್ತು ವಿವಿಧ ಕನ್ನಡ ಸಂಘಟನೆಗಳು ದುಬೈನಲ್ಲಿ ಆಯೋಜಿಸಿದ್ದ 66ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಇಂದು ಭಾಗವಹಿಸಿದ ಸಚಿವರಾದ ಬಿ ಸಿ ನಾಗೇಶ್ ಅಣ್ಣ.

ಇಂದು ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ, ಆಶೀರ್ವಾದ ಪಡೆದು ಕ್ಷೇತ್ರದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಶಾಸಕರಾದ @HPoonja ಅವರೊಂದಿಗೆ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ‌ ಜೊತೆ ಮಾತುಕತೆ ನಡೆಸಿದರು.


2019

ತುಂಬಿದ ತಿಪಟೂರು ಕೆರೆಯನ್ನು ಸಾರ್ವಜನಿಕರು, ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳು, ಅಧಿಕಾರಿಗಳ ಜೊತೆ ತಾವು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ತಾಲ್ಲೂಕಿನ ಭಗೀರಥ ಬಿ ಸಿ ನಾಗೇಶ್ ಅಣ್ಣ.

ಸಾರ್ವಜನಿಕ ರೊಂದಿಗೆ ಕೆರೆಯ ಸ್ವಚ್ಛತಾ ಕಾರ್ಯ ಮಾಡಿ ಅವರೊಂದಿಗೆ ಕೂತು ಉಪಹಾರ ಸೇವಿಸಿದ. ಸರಳ ನಾಯಕರು ಶಾಸಕರಾದ ಬಿ ಸಿ ನಾಗೇಶ್ ಅಣ್ಣ.

Link to the above FB post by Jayanth Bellur



KVM DIAMOND JUBILEE [1966 – 2026]… growing stronger

July 27, 2026

Above: Don’t miss the 1st PODCAST of KVMAA related to the Diamond Jubilee Celebrations of PM Shri KVM Bengaluru



Above: KVM DIAMOND JUBILEE ANTHEM


KVM Diamond Jubilee
Event by Mahesh Ubhayakar and Kendriya Vidyalaya Malleswaram
Chowdiah Memorial Hall
Public · Anyone on or off Facebook
Come and Enjoy Dear KVM Alumni
Donor Pass ₹1500 Contact Sudhakar
at +91 99864 93612
K💎M 💎JUBILEE ANTHEM
Video on https://youtu.be/6tW4cbfPOmQ?feature=shared
LIsten on Stereo🎧 See less
Bangalore, India


Above: The dance CULT ❤️

Different generations, different people, different stories—yet one legacy that binds us all. ✨❤️
Rooted in love, united as one. Forever the KV Family. 🌿🤍
#KVFamily #MultiGeneration #OneLegacy #FamilyForever

Thank you Respected old scolers kvs best wishes – from m chandrashekhar kvs retd sanskrit teacher 🙏
I am proud of you all 👍💐🙏

Extended version 4.1/2 mins…Listen on stereo 🎧
https://suno.com/s/lF6Ji8GrS8hIOIj4
Your feedback please

Mahesh Ubhayakar: My last Hurrah for tomorrow’s event. Some of you aren’t in the main alumni group so posted here to listen to this Anthem, get motivated and fully energised for tomorrow. I was stuck in the assembly chain and cud not get to play it in the hall. It may not get played tomorrow bcoz program is jam packed. Enjoy on 🎧. Am posting link as well as the MP3 file in case the link isn’t accessible.

Mahesh Ubhayakar: Best wishes for today, folks! 👍👌

  • Enjoy the proceedings,
  • Catch up with Friends,
  • Pay respects to your teachers.
  • Rock the stage.
  • Pamper your stomach.
    Registration counters? No wishes needed — they’re gonna get rocked anyway with zero mock drills 😅

Overall,…
HAVE A BLAST!💥
🥳🎊🎉

Anuradha Suresh: Thankyou bacchan saab🎊🎉🤩🥳👍🏻

Mahesh Ubhayakar: Streaming on TV – Quality is superb and very impressive 👌👌 1080p and not a dull moment bcoz of quality, LED panel, side panels… am wondering whether I shud come later 😃

Above: Small little beautiful convo between the two iron ladies 🥰🙏🏻🙏🏻…Thank you for sharing this priceless video 🙏


Morning program 👆


Ravikiran: Congrats to all the volunteers for an amazing Diamond Jubilee event.🙏🙏

Hemanth Bekal: Thank you team for giving me an opportunity to Volunteer and serve for this wonderful event. 🙏
Thanks Sundar & Kaushik for motivating me to participate ☺️ After meeting everyone else in the team, I never felt left out.

Absolutely never easy to bring out 1000+ snd no one complaining about registration food parking …..and giving attention to logistics incredible lot [Message from 1979 Sudhakar’s batch appreciating this group]

K Govind Babu: Absolutely agree. Gr8 efforts and gr8 outcome 🙏

Rajalakshmi: Dear Members of the Alumni Association and Alumni Trust,
On behalf of the students, staff, and the entire PM SHRI Kendriya Vidyalaya Malleshwaram family, I extend my heartfelt gratitude to the Alumni Association and Alumni Trust for organizing and supporting the Diamond Jubilee Celebration in such a magnificent manner.
The event was a memorable tribute to the glorious 60-year journey of our institution. The felicitation of former and present teachers was a truly touching gesture that reflected the deep respect and affection our alumni hold for their mentors. It was a proud and emotional moment for everyone associated with the Vidyalaya.
The meticulous planning, flawless coordination, and excellent arrangements made the celebration a grand success. The live-streaming arrangements were particularly commendable, enabling alumni and well-wishers across the world to participate in and cherish this historic occasion.
Your dedication, commitment, and love for your alma mater were evident in every aspect of the celebration. The Diamond Jubilee has created memories that will remain etched in our hearts for years to come and has further strengthened the bond between the Vidyalaya and its alumni.
Once again, on behalf of the students, staff, parents, and the entire KVM community, I convey my sincere appreciation and thanks to all the organizers, volunteers, members of the Alumni Association, and the Alumni Trust for celebrating this milestone in such a grand and memorable way.
With warm regards,
Anil Sharma
Principal
PM SHRI Kendriya Vidyalaya Malleshwaram

Sundar Parashuraman: Thank u but the message seems a bit short , if u could do the same with one of ur mimicry videos it wl keep us motivated till the platinum jubilee 😜, jokes apart ….u did a fantastic job , thank u …some amazing entertainment 💐
Thank you Hemamth , always nice to hv u around
Fantastic….u guys rock!!!
Passing the baton on , thank you Koushik for relentlessly pushing me to be a part of it and a very special thanks to @~Beena G for endlessly supporting me

Mahesh U: Sorry, Deepa. I knew about your involvement just now or else wudve uncluded you too into the above meme.

Rama Harave: Dear Volunteers, Thank you all for your unflinching support. Your energy was contagious and egged me on too. Appreciate all that you did, the various roles each of you played and the results were there for all of us to see. I have received feedback from several people who attended or watched from afar and everyone had only praises for each one of us. This goes to you all.

Towards the end Yashaswini also called and asked if she can take the food packets and I thought that was the best thing to do.

This is what a strong team does. Finds the place they need to fill apart from their own allocation and fulfils it. Once again well done everyone. Thank you.

We will have to meet again at the school for the AGM, I will announce the dates shortly. Request you all to make time to attend this quick one.

Ravikiran: Special Shout out to Goutam @Gautam Pallakki who flawlessly managed all the behind the scene “scenes” that appeared on the LED panels!!

Rajalakshmi: Hi Ramki, I have no where to thank you for all your support yesterday..
I assigned the gratitude tree to you and kind of forgot about it , because I knew I had delegated it to the right person.
More than that i can’t forget the support you extended for carrying my bag, baskets, that music symbol etc.. so thanks a heap it was nice to have been introduced to you… you did a great job… Rama was all praises for you help during the entire event.. by any chance could you pick up the baskets, My leg started cramping a lot and i could hardly Sit that’s when i decided to get home

Mahesh U: Flawlessly and selflessly, together with his wife on Friday and maybe earlier too. There was a talk of a much deserving honorarium for him. Any update?

Rajalakshmi: I second the thought of Honararium for Gautham without his coordination the felicitation would have been dull, and Deepthi also would have not had profile of the teachers who came in directly without going to registration counter.

Gautham Pallakki: Thank you so much everyone for the incredibly kind words! It was an absolute pleasure working alongside all of you to make the felicitation special for our teachers. I’m just glad the visual setups and coordination came together so seamlessly on stage. Kudos to the entire team for pulling off such a memorable event! 🙏✨

Thank you! We really appreciate that. We learned from the best! It was a fantastic experience coordinating everything this year, and the younger team is definitely looking forward to bringing even more energy and tech to our future alumni events. Cheers to a great show!

Vivek: Great work Gautham. You youngsters are the future and it is indeed heartening to see the enthusiasm in you guys. I feel it is the right time to hand over the baton of the Association to such a young and energetic team to carry forward the Alumni activities.

Shylaja Varma: Must tell you all this. When Meenakshi Ma’am one of the former principals, was leaving she said “let me tell you something. This is the best Alumni Association among the KVs all over India. I have never seen anything like this”

Mahesh U: Bhanumati maam also echoed this when I spoke with her at length while inviting.

Press meet link above

Deepthi: A special mention of Anagha (I hope I got the right name). The poor child ran to collect the mementos for each of the teachers to be felicitated. 👏 👏 👏… Shylaja Varma: And she came backstage after helping at registration table. She was excellent there also…Rajalakshmi: I also second that she messaged early this morning thanking me for the opportunity.. she is a gem of a girl

Sundar P: All volunteers are waiting for special gifts from the secretary 😛

Ramki Bellur: Dear Alumni team,

A heartfelt THANK YOU to our beloved school KVM, respected Teachers, Students, and Alumni for making the 60th Diamond Jubilee celebrations so beautifully organised and truly memorable.

It was a privilege to volunteer and give back, in a small way, to the institution that has shaped us into who we are today.

As our school prayer beautifully reminds us:
Hamara dharm ho seva, hamara karm ho seva
Sada imaan ho seva, woh sevak jan bana dena.

Serving our school is not just a responsibility, but a privilege and a cherished memory. Grateful to have been a part of this wonderful celebration . 🙏

Sundar P: Still waiting so that I can exchange pleasantries 😛….jokes apart for someone leading the whole event from the front and putting years of work with great composure and poise ….@KVM Rama Harave , fantastic job, thank you for giving us all a fabulous day

Leena Madan: A REMINISCENCE PAR EXCELLENCE….

Fifty decades have flown but Impressions remain,
The Faces from my Iconic School,
The Pillars of my Past,
Weaved intricate in the Fabric of my Soul.
A Senior my Feelings run High,
A pang of Nostalgia,tears i cannot deny.
Surreal Moments,a witness to bygone times,
Aged Bodies,yet young in Spirits.
Forever Grateful For the Imparted Treasure.
Gelled in Wisdom n Love So Special.
In this Sacred Reunion,
Even The Nuances will Remain.
In Hearts United,we all will Sustain.
Love’s Gentle Touch Forever will Remain….

LEENA MADAN


On behalf of all the members of the KVM Alumni Trust, I wish to thank each of you for your magnanimous contributions towards institution of awards and for various projects in your alma mater.

A big thank you to all the Alumni Association core team members, members of various committees, volunteers, performers and alumni members from across batches .

The members of the Trust are indeed in awe of your loyalty and love for the school and your teachers.
It was a pleasure to see you all at the Diamond Jubilee Celebration on 8 August 2026 .

To those of you who could not be present that day, we appreciate your greetings and good wishes from wherever in the world you are.

Warmest regards

B.Vijayalakshmi
Sri Ravikumaran Nair


Beena G: Thank you for all the support it was wonderful to work together

Prathibha: Very nicely written and captured 😍


Sujatha – KVM ‘X’ 1981
I saw your blog—absolutely wonderful! You have beautifully captured so many precious memories of our Diamond Jubilee celebration. It was such a joy to go through the blog and relive those special moments.I truly appreciate your initiative and the effort you’ve put into creating this beautiful blog. It’s a wonderful way to preserve our memories and bring back the nostalgia of those unforgettable days. Really a great effort.Thank you for creating something so special for all of us.

I did a dance medley for the event


Below pictures shared by Rakshitha Kumar

Also read:

Teacher’s Dialogues and Mannerisms

Cork ball and Library ‘Miss’

Kendriya Vidyalaya Malleswaram: Nostalgia 1

Kendriya Vidyalaya Malleswaram: Nostalgia 2

Kendriya Vidyalaya Malleswaram: Nostalgia 3

Kendriya Vidyalaya Malleswaram: Nostalgia 4

Kendriya Vidyalaya Malleswaram Alumni Meet – Jan 26, 2012

Saturday First Two Periods: Mass PT

Kendriya Vidyalaya Malleswaram Alumni Meet – Jan 26, 2013

Lunch time @ School!

Smt.B.Vijayalakshmi madam (KVM)

T Prabhakar Sir, Former Principal (Kendriya Vidyalaya Malleswaram) No More

Suleena Nair Madam no more

Random Jottings on Facebook – 4

Memories of Childhood Injuries

15 August, 2007 was a lovely day


Kendriya Vidyalaya Malleswaram: Nostalgia 5

July 25, 2026

Above: Our Badrinath Sir with 73-74 batch – He was Brilliant in Physics….
Now an IITian n IIM… – Heard He is coming All The Way From The U.S for the KVM Diamond Jubilee at Chowdiah Memorial Hall


Above: K Vasanth Kumar Sir – 86 yrs, KVM Maths Teacher – 1984-2002
Will be attending the afternoon session

Below: He has done the translation into kannada and may carry about 4-5 copies with him


Also read:

KVM DIAMOND JUBILEE [1966 – 2026]… growing stronger

Teacher’s Dialogues and Mannerisms

Cork ball and Library ‘Miss’

Kendriya Vidyalaya Malleswaram: Nostalgia 1

Kendriya Vidyalaya Malleswaram: Nostalgia 2

Kendriya Vidyalaya Malleswaram: Nostalgia 3

Kendriya Vidyalaya Malleswaram: Nostalgia 4

Kendriya Vidyalaya Malleswaram Alumni Meet – Jan 26, 2012

Saturday First Two Periods: Mass PT

Kendriya Vidyalaya Malleswaram Alumni Meet – Jan 26, 2013

Lunch time @ School!

Smt.B.Vijayalakshmi madam (KVM)

T Prabhakar Sir, Former Principal (Kendriya Vidyalaya Malleswaram) No More

Suleena Nair Madam no more

Random Jottings on Facebook – 4

Memories of Childhood Injuries

15 August, 2007 was a lovely day


APARANJI: COVER, INSIDE COLOR, CENTER SPREAD ILLUSTRATIONS BY RAMKI BELLUR

July 20, 2026

APARANJI KANNADA HUMOUR MAGAZINE WEBSITE

APARANJI : Cartoons and articles by Ramki Bellur

ನಮ್ ಅಪರಂಜಿಗೆ ಪ್ರಶಸ್ತಿ ಸಿಕ್ತು !

ಸಿ ಸಿ ಟಿ ವಿ ಕ್ಯಾಮೆರಾಗಳ ಸಮಾವೇಶ

ಅಪರಂಜಿ ಚಾಳಿ-ಸಾ

Ars Longa, Vita Brevis

ಅಪರಂಜಿ ಚಾಲೀಸಾ

Sri Ullas Rayasam – BEECHI PRAKASHANA


ಶೂನ್ಯ ಸಂಪಾದನೆ

July 17, 2026

Create your own website, free on WordPress.com.Create your own website.
Start free